ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯದಲ್ಲಿಯ ಇತರೆ ಸಂಘಟನೆಗಳಿಗೆ ಮಾದರಿಯಾಗುವ ಸಂಘಟನೆಯಾಗಿದೆ. ೨೦೧೩ ರಲ್ಲಿ ಉದಯವಾದ ಸಂಘಟನೆ ಮೊದ ಮೊದಲು ಕೇವಲ ಬೆರಳೆಣಿಕೆಯಷ್ಟು ಉತ್ಸಾಹಿಗಳಿಂದ ಸಸಿಯಾಗಿದ್ದ ಸಂಘಟನೆ ಇಂದು ರಾಜ್ಯದಲ್ಲಿ ಅತೀ ಹೆಚ್ಚು ಸದಸ್ಯರುಳ್ಳ ಸಮಾಜದ ಸಂಘಟನೆಯಾಗುವ ಮೂಲಕ ಹೆಮ್ಮರವಾಗಿ ಬೆಳೆದು ನಿಂತಿದೆ.

ಶ್ರೀ ಪ್ರಶಾಂತ್ ಕಲ್ಲೂರ್ ಅವರು ಸಮಾಜಕ್ಕೆ ಸಮಾಜದ ಏಳಿಗೆಗಾಗಿ, ಏಕತೆಗಾಗಿ ಸ್ಥಾಪಿಸಿದ ಸಂಘಟನೆಯೇ ವೀರಶೈವ ಲಿಂಗಾಯತ ಯುವ ವೇದಿಕೆ. ಬಡವರ ಬೆನ್ನೆಲುಬಾಗಲು, ಸಮುದಾಯದ ರಕ್ಷಣೆಗಾಗಿ ದಿಟ್ಟ ಹೆಜ್ಜೆಯನ್ನಿಟ್ಟು ಮುಂದಾದ ಸಂಘಟನೆಗೆ ಆರಂಭದಲ್ಲಿ ಸಾಕಷ್ಟು ಕಹಿ ಅನುಭವದಾದದ್ದು ಇದೇ, ಸಂಘಟನೆಯ ಸ್ಥಾಪನೆಗೊಂಡ ದಿನದಿಂದ ಈವರೆಗೂ ಸಂಘಟನೆಯ ಏಳಿಗೆ ಸಹಿಸದ ದೊಡ್ಡ ದೊಡ್ಡ ವ್ಯಕ್ತಿಗಳ ಅಸೂಯೆ ಹಾಗೂ ತೊಂದರೆಗಳ ನಡುವೆಯೇ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡದೇ ಮುನ್ನಡೆಯುತ್ತಿದೇ, ದಿಟ್ಟ ಹೆಜ್ಜೆಗೆ ಜನರ ಬೆಂಬಲ ಸಹಕಾರದ ಮೂಲಕ ಇಂದು ಬದ್ರವಾಗಿ ಬೇರೂರಿದ್ದೇವೆ ಇನ್ನ ರೆಂಬೆ ಕೊಂಬೆಯನ್ನು ಸಧೃಢ ಮಾಡುವ ಕಾರ್ಯದಲ್ಲಿ ಸಕ್ರೀಯವಾಗಿ ದಿನ ೧೮ ಗಂಟೆಗಲನ್ನೂ ಮೀಸಲಿಟ್ಟು ಶ್ರಮಿಸುತ್ತಿದೆ ವೀರಶೈವ ಲಿಂಗಾಯತ ಯುವ ವೇದಿಕೆ.

ವೀರಶೈವ ಲಿಂಗಾಯತ ಯುವ ವೇದಿಕೆ ಸಮಾಜದ ಒಗ್ಗಟ್ಟಿಗಾಗಿ, ಸಮಾಜದ ಒಳಿತಿಗಾಗಿ, ಸಮಾಜದ ಉಳಿವಿಗಾಗಿ ಆರಂಭಗೊಂಡ ಅದರಲ್ಲೂ ಸಾಮಾನ್ಯರ ನೆರವಿಗೆ, ಯುವಕರ (ಯುವ ಮನಸ್ಸಿರುವವರೂ ಯುವಕರೇ ) ವೇದಿಕೆಯಾಗಿ ನಿರ್ಮಾಣಗೊಂಡ ಸಂಘಟನೆ ಇದು. ಸಂಘಕ್ಕೆ ಆರಂಭಗೊಂಡಂದಿನಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಭಿನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ನಮ್ಮವರ ಮನೆ ಮತ್ತು ಮನ ತಲುಪುವ ಕಾರ್ಯದಲ್ಲಿ ತೊಡಗಿಕೊಂಡು ಸಮಾಜದ ಏಳಿಗೆಗಾಗಿ ಹಗಲಿರುಳೆನ್ನದೇ ಶ್ರಮಿಸಲಾಗುತ್ತಿದೆ.

ಸಂಘಟನೆಯು ಕೇವಲ ತನ್ನ ವಿಸ್ತಾರಕ್ಕೆ ಮಾತ್ರ ಸೀಮಿತವಾಗದೆ ಜನ್ಮತಾಳಿದಂದಿನಿಂದ ಇಂದಿನವರೆಗೂ ವಿಶಿಷ್ಟ ಮತ್ತು ವಿಭಿನ್ನವಾದ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ಅಚ್ಚಾಗುತ್ತಿದೆ.

ಒಂದು ಸಂಘಟನೆ ಹುಟ್ಟಿ ಕೇವಲ ಮೂರು ವರ್ಷದಲ್ಲಿ ಇನ್ನೂರಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ, ಆ ಕಾರ್ಯಕ್ರಮಗಳ ಸರಣಿ ಇನ್ನೂ ಮುಂದುವರೆದಿದೆ ಅವುಗಳಲ್ಲಿ ಕೆಲವೊಂದನ್ನು ಹೇಳುವುದಾದರೆ, ಈ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯದಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ವಿದ್ಯಾಭ್ಯಾಸಕ್ಕೆ ಅತೀ ಹೆಚ್ಚು ಒತ್ತು ನೀಡುತ್ತಿರುವುದು.