ಮೂಲತಃ ಕೊಡಗಿನ ಸುಂಟಿಕೊಪ್ಪದ ಕಲ್ಲೂರು ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದು ನಂತರದ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಪರಿವಾರ ಸಮೇತರಾಗಿ ಬೆಂಗಳೂರಿಗೆ ವಲಸಿಗರಾಗಿ ಬಂದು ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಂಡು ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವಕೊಟ್ಟು ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಕಿಚ್ಚು ಇದ್ದಂತಹ ಪ್ರಶಾಂತ್ ಕಲ್ಲೂರ್ ಸಾಕಷ್ಟು ಹೋರಾಟಗಳನ್ನಾಯೋಜಿಸಿ ನ್ಯಾಯದ ಪರ ನಿಂತು, ಶೋಷಿತರ ಧ್ವನಿಯಾಗಿ ಬಂದ ಇವರು ಐ ಟಿ ಐ ವ್ಯಾಸಂಗ ಮುಗಿಸಿಕೊಂಡು ಪುಟ್ಟದೊಂದು ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಶಾಂತ್ ಕೆ ಎಸ್ ನಂತರದ ದಿನಗಳಲ್ಲಿ ತಮ್ಮದೇ ಆದಂತಹ ಕಂಪನಿಯೊಂದನ್ನು ನಿರ್ಮಿಸುವ ಕನಸಿನ ಗಿಡಕ್ಕೆ ನೀರುಣಿಸಿ ಉದ್ಯಮಿಗಳಾಗಿ ತಮ್ಮದೇ ಸಾಫ್ಟ್ ವೇರ್ ಕಂಪನಿಯೊಂದನ್ನಾರಂಭಿಸಿ ನೂರಾರು ಮಂದಿಗೆ ಕೆಲಸ ನೀಡಿ ಅನ್ನದಾತರಾಗಿ ಇಂದಿಗೂ ಅದೆಷ್ಟೋ ಮನೆಗಳ ದೀಪವಾಗಿದ್ದಾರೆ.

ಸಾಫ್ಟ್ ವೇರ್ ಕಂಪನಿಯನ್ನು ನಡೆಸುತ್ತಲೇ ಸಿನಿಮಾ ಹಾಗೂ ನಾಟಕಗಳ ನಿರ್ಮಾಣ, ರಿಯಲ್ ಎಸ್ಟೇಟ್, ಪತ್ರಿಕಾ ರಂಗದಲ್ಲಿ ಜೊತೆ ಜೊತೆಯಲ್ಲೇ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಹಲವಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಡವರ ಧೀನ ದಲಿತರ ಬಗ್ಗೆ ಒಲವನ್ನು ಸದಾ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಾ ಬಂದ ಪ್ರಶಾಂತ್ ಕಲ್ಲೂರ್ ಅವರಿಗೆ ಹೇಗಾದರೂ ಸರಿ ನಮ್ಮ ಸಮಾಜದವರಿಗೆ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಡಬೇಕು ನಮ್ಮವರಿಗೆ ನೆರವು ನೀಡಬೇಕು ಅಳಿವಿನ ಅಂಚಿನಲ್ಲಿರುವ ಸಮಾಜದ ಸ್ಥಿತಿಗತಿಯನ್ನು ಕಂಡು ಆರಂಭಿಸಿದ ಸಂಸ್ಥೆಯೇ ವೀರಶೈವ ಲಿಂಗಾಯತ ಯುವ ವೇದಿಕೆ.

ವೀರಶೈವ ಲಿಂಗಾಯತ ಯುವ ವೇದಿಕೆ ಆರಂಭದಲ್ಲಿ ಕೇವಲ ಒಂದೆರಡು ಮಂದಿಯನ್ನಿಟ್ಟುಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ ವೇದಿಕೆಯ ಕಾರ್ಯಕ್ರಮಗಳನ್ನು ಯುವ ಸಮೂಹ ಮೆಚ್ಚಿ ಸಂಘಟನೆಯ ಸದಸ್ಯತ್ವ ಸ್ವೀಕರಿಸಿ ಇಂದಿಗೆ ೬ ಲಕ್ಷ ಮಂದಿ ಸಂಘಟನೆಯ ಸದ್ಯಸರಾಗಿದ್ದಾರೆನ್ನುವ ಹೆಮ್ಮೆ ಪ್ರಶಾಂತ್ ಕಲ್ಲೂರ್ ಅವರದ್ದು.

ಜಾತಿಜನಗಣತಿ ವಿರೋಧಿ ೪೦೦ ಕಿಮೀ ಪಾದಾಯಾತ್ರೆ, ಗುರುಪುರ ಜಂಗಮ ಮಠದ ಉಳಿವಿಗಾಗಿ ಹೋರಾಟ, ಸಾಮಾಜಿಕ ಭಹಿಷ್ಕಾರಕ್ಕೊಳಗಾದ ಸಿವರುದ್ರಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ಯಶಸ್ವಿ, ಬಿಬಿಎಂಪಿ ವಿಭಜನೆ ವಿರೋಧಿಸಿ ಪ್ರತಿಭಟನೆ, ಕಳಸಾ ಬಂಡೂರಿ ವಿಚಾರವಾಗಿ ಪ್ರತಿಭಟನೆ, ವಿಧವೆಯರಿಗೆ ವಿಧವಾ ವೇತನ, ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಸಕ್ಕೆ ಧನ ಸಹಾಯ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಚಾಲಕರು ಹಾಗೂ ಕಾರ್ಮಿಕರಿಗೆ ಜೀವ ವಿಮೆ, ಮಲ್ಲಿಕಾರ್ಜುನ ಬಂಡೆ ಅವರ ವಿಚಾರವಾಗಿ ಹೋರಾಟ, ಬಸವಜ್ಯೋತಿ ಮಾಸಿಕ ಪತ್ರಿಕೆ, ಸಮಾಜದ ಗಣ್ಯರ ಹುಟ್ಟುಹಬ್ಬವಿರಬಹುದು, ಅಥವಾ ನುಡಿ ನಮನ ಕಾರ್ಯಕ್ರಮಗಳಿರಬಹುದು ಅಥವಾ ಶ್ರದ್ಧಾಂಜಲಿಯಿರಬಹುದು ಸಮಾಜಮುಖಿ ಕಾರ್ಯಕ್ರಮಗಳನ್ನೇ ಮಾಡಿಕೊಂಡು ಬಂದಿರುವ ಇವರಿಗೆ ಹಲವಾರು ಪ್ರಶಸ್ತಿಗಳು ಗೌರವಗಳಿಗೆ ಪಾತ್ರರಾಗಿರುತ್ತಾರೆ. ಅವುಗಳಲ್ಲಿ ರಾಜ್ಯ ಸೇವಾ ರತ್ನ ಪ್ರಶಸ್ತಿ, ಸಮಾಜ ಸೇವಾಶ್ರೀ ಪ್ರಶಸ್ತಿ, ರಾಜ್ಯ ಪ್ರಜಾ ರತ್ನ ಪ್ರಶಸ್ತಿ, ಕಾಯಕ ಶ್ರೀ ಪ್ರಶಸ್ತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೊಡಮಾಡುವ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ ಸಹ ಇವರ ಮುಡಿಗೇರಿದೆ. ಹೀಗೆ ಹತ್ತು ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿರುವ ಕೀರ್ತಿ ಇವರದ್ದು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪುಟಗಟ್ಟಲೆ ಮಾಡಬಹುದು ಇವರ ಸಮಾಜಪರ ಕಳಕಳಿಯಿಂದ ಸಮಾಜಮುಖಿ ಕಾರ್ಯಕ್ರಮಗಳಿಂದ ಸಮಾಜ ಒಗ್ಗೂಡುವ ಎಲ್ಲಾ ಭವಿಷ್ಯದ ಭರವಸೆಯೂ ಯುವಕರಿಗೆ ಮೂಡಿಸುತ್ತಿರುವುದು ಸಂತೋಷದ ಸಂಗತಿಯೇ ಸರಿ.