ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯದಲ್ಲಿಯ ಇತರೆ ಸಂಘಟನೆಗಳಿಗೆ ಮಾದರಿಯಾಗುವ ಸಂಘಟನೆಯಾಗಿದೆ. ೨೦೧೩ ರಲ್ಲಿ ಉದಯವಾದ ಸಂಘಟನೆ ಮೊದ ಮೊದಲು ಕೇವಲ ಬೆರಳೆಣಿಕೆಯಷ್ಟು ಉತ್ಸಾಹಿಗಳಿಂದ ಸಸಿಯಾಗಿದ್ದ ಸಂಘಟನೆ ಇಂದು ರಾಜ್ಯದಲ್ಲಿ ಅತೀ ಹೆಚ್ಚು ಸದಸ್ಯರುಳ್ಳ ಸಮಾಜದ ಸಂಘಟನೆಯಾಗುವ ಮೂಲಕ ಹೆಮ್ಮರವಾಗಿ ಬೆಳೆದು ನಿಂತಿದೆ.

ಶ್ರೀ ಪ್ರಶಾಂತ್ ಕಲ್ಲೂರ್ ಅವರು ಸಮಾಜಕ್ಕೆ ಸಮಾಜದ ಏಳಿಗೆಗಾಗಿ, ಏಕತೆಗಾಗಿ ಸ್ಥಾಪಿಸಿದ ಸಂಘಟನೆಯೇ ವೀರಶೈವ ಲಿಂಗಾಯತ ಯುವ ವೇದಿಕೆ. ಬಡವರ ಬೆನ್ನೆಲುಬಾಗಲು, ಸಮುದಾಯದ ರಕ್ಷಣೆಗಾಗಿ ದಿಟ್ಟ ಹೆಜ್ಜೆಯನ್ನಿಟ್ಟು ಮುಂದಾದ ಸಂಘಟನೆಗೆ ಆರಂಭದಲ್ಲಿ ಸಾಕಷ್ಟು ಕಹಿ ಅನುಭವದಾದದ್ದು ಇದೇ, ಸಂಘಟನೆಯ ಸ್ಥಾಪನೆಗೊಂಡ ದಿನದಿಂದ ಈವರೆಗೂ ಸಂಘಟನೆಯ ಏಳಿಗೆ ಸಹಿಸದ ದೊಡ್ಡ ದೊಡ್ಡ ವ್ಯಕ್ತಿಗಳ ಅಸೂಯೆ ಹಾಗೂ ತೊಂದರೆಗಳ ನಡುವೆಯೇ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡದೇ ಮುನ್ನಡೆಯುತ್ತಿದೇ, ದಿಟ್ಟ ಹೆಜ್ಜೆಗೆ ಜನರ ಬೆಂಬಲ ಸಹಕಾರದ ಮೂಲಕ ಇಂದು ಬದ್ರವಾಗಿ ಬೇರೂರಿದ್ದೇವೆ ಇನ್ನ ರೆಂಬೆ ಕೊಂಬೆಯನ್ನು ಸಧೃಢ ಮಾಡುವ ಕಾರ್ಯದಲ್ಲಿ ಸಕ್ರೀಯವಾಗಿ ದಿನ ೧೮ ಗಂಟೆಗಲನ್ನೂ ಮೀಸಲಿಟ್ಟು ಶ್ರಮಿಸುತ್ತಿದೆ ವೀರಶೈವ ಲಿಂಗಾಯತ ಯುವ ವೇದಿಕೆ.

ವೀರಶೈವ ಲಿಂಗಾಯತ ಯುವ ವೇದಿಕೆ ಸಮಾಜದ ಒಗ್ಗಟ್ಟಿಗಾಗಿ, ಸಮಾಜದ ಒಳಿತಿಗಾಗಿ, ಸಮಾಜದ ಉಳಿವಿಗಾಗಿ ಆರಂಭಗೊಂಡ ಅದರಲ್ಲೂ ಸಾಮಾನ್ಯರ ನೆರವಿಗೆ, ಯುವಕರ (ಯುವ ಮನಸ್ಸಿರುವವರೂ ಯುವಕರೇ ) ವೇದಿಕೆಯಾಗಿ ನಿರ್ಮಾಣಗೊಂಡ ಸಂಘಟನೆ ಇದು. ಸಂಘಕ್ಕೆ ಆರಂಭಗೊಂಡಂದಿನಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಭಿನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ನಮ್ಮವರ ಮನೆ ಮತ್ತು ಮನ ತಲುಪುವ ಕಾರ್ಯದಲ್ಲಿ ತೊಡಗಿಕೊಂಡು ಸಮಾಜದ ಏಳಿಗೆಗಾಗಿ ಹಗಲಿರುಳೆನ್ನದೇ ಶ್ರಮಿಸಲಾಗುತ್ತಿದೆ.

ಸಂಘಟನೆಯು ಕೇವಲ ತನ್ನ ವಿಸ್ತಾರಕ್ಕೆ ಮಾತ್ರ ಸೀಮಿತವಾಗದೆ ಜನ್ಮತಾಳಿದಂದಿನಿಂದ ಇಂದಿನವರೆಗೂ ವಿಶಿಷ್ಟ ಮತ್ತು ವಿಭಿನ್ನವಾದ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ಅಚ್ಚಾಗುತ್ತಿದೆ.

ಒಂದು ಸಂಘಟನೆ ಹುಟ್ಟಿ ಕೇವಲ ಮೂರು ವರ್ಷದಲ್ಲಿ ಇನ್ನೂರಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ, ಆ ಕಾರ್ಯಕ್ರಮಗಳ ಸರಣಿ ಇನ್ನೂ ಮುಂದುವರೆದಿದೆ ಅವುಗಳಲ್ಲಿ ಕೆಲವೊಂದನ್ನು ಹೇಳುವುದಾದರೆ, ಈ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯದಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ವಿದ್ಯಾಭ್ಯಾಸಕ್ಕೆ ಅತೀ ಹೆಚ್ಚು ಒತ್ತು ನೀಡುತ್ತಿರುವುದು.

ಸಮಾಜ ಕಡುಬಡತನದ ಕುಟುಂಬಗಳಿಗೆ ಆಟೋ ಕೊಡುಸುವುದು ಹಾಗೂ ಬಡ ಕುಟುಂಬದ ಆಟೋ ಅಥವಾ ಇತರೆ ಕಷ್ಟದ ಕೆಲಸದಿಂದ ಬದುಕು ಸಾಗಿಸುವವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ವಿಶೇಷ ನೆರವು ನೀಡುವುದು, ವಯೋವೃದ್ಧರಿಗೆ ವಸ್ತ್ರ, ಆಸ್ಪತ್ರೆಗೆ ಧನಸಹಾಯ ನೀಡುವುದು, ದೇಶದ ಯಾವುದೇ ರಾಜ್ಯದಿಂದ ಧಾರ್ಮಿಕ ಸ್ವಾಮೀಜಿಗಳು ಬೆಂಗಳೂರಿನಂತಹ ಮಹಾ ನಗರಕ್ಕೆ ಬಂದಾಗ ವಸತಿಗೆ ಸಮಸ್ಯೆಯಾಗಬಾರದೆಂಬ ದೂರದೃಷ್ಟಿಯಿಂದ ಸ್ವಾಮೀಜಿಗಳಿಗಾಗಿಯೇ ವಿಶೇಷ ಸೌಲಭ್ಯಗಳುಳ್ಳ ವಸತಿ ನಿಲಯವನ್ನು ನಿರ್ಮಿಸಿ ಇಡೀ ದೇಶಕ್ಕೆ ಮಾದರಿಯಾದ ಏಕಮಾತ್ರ ಸಂಘಟನೆಯೆಂದರೆ ತಪ್ಪಾಗಲಾರದು.

ರಾಜ್ಯದಲ್ಲಿಯ ಪ್ರತಿ ವೀರಶೈವ ಲಿಂಗಾಯತ ಮನೆಗಳಲ್ಲಿ ವಿಶ್ವಗುರು ಬಸವಣ್ಣನವರು ಸೇರಿದಂತೆ ಶರಣರ ಭಾವಚಿತ್ರಗಳನ್ನು ಈವರೆಗೂ ಎಂಟು ಲಕ್ಷಕ್ಕಿಂತ ಹೆಚ್ಚುರಾಜ್ಯಾದ್ಯಂತ ಉಚಿತವಾಗಿ ವಿತರಿಸಲಾಗಿದೆ, ಇನ್ನೂ ಅತೀ ಹೆಚ್ಚು ಶರಣರನ್ನು ಅವರ ವಚನಗಳನ್ನು ತಲುಪುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಶ್ರಮಿಸುತ್ತಿದೆ. ನಡೆದಾಡುವ ದೇವರೆಂದೇ ಆರಾಧಿಸಲ್ಪಡುವ ತುಮಕೂರಿನ ಸಿಧ್ಧಗಂಗಾ ಮಠದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನದಂದು ಪ್ರತೀ ವರ್ಷ ಮಠದ ಆವರಣದಲ್ಲಿ ಮತ್ತು ತುಮಕೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಚಿತವಾಗಿ ಶ್ರೀಗಳ ಭಾವಚಿತ್ರಗಳನ್ನು ವಿತರಿಸಿ, ಮನದಲ್ಲಿ ಶ್ರೀಗಳು ಸದಾ ನೆಲೆಸುವಂತೆ ಮಾಡುತ್ತಿರುವ ಸಂಘಟನೆ.

ಇಡೀ ರಾಜ್ಯದಲ್ಲಿ ಯಾವುದೇ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮಾಡದ ಉಚಿತ ಕರೆಯ ಸಹಾಯವಾಣಿಯನ್ನು ನಿರ್ಮಿಸಿ ದಾಖಲೆ ನಿರ್ಮಿಸಿದೆ. ಈ ಸಹಾಯವಾಣಿಗೆ ಕರೆ ಮಾಡುವ ಮೂಲಕ ನಾಡಿನ ವೀರಶೈವ ಲಿಂಗಾಯತ ಸಮುದಾಯದ ಜನ ಸಂಘಟನೆಯ ಸದಸ್ಯತ್ವವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಬೆಂಗಳೂರಂತಹ ಮಹಾನಗರಕ್ಕೆ ರಾಜ್ಯದ ಇತರೆಡೆಗಳಿಂದ ಬಂದವರು ತಮಗೆ ಯಾವುದೇ ರೀತಿಯ ಸಮಸ್ಯೆಯಾದಲ್ಲಿ ತಕ್ಷಣಕ್ಕೆ ಈ ಉಚಿತ ಸಹಾಯವಾಣಿಗೆ ಕರೆ ಮಾಡಿದಲ್ಲಿ ಅವರ ನೆರವಿಗೆ ಧಾವಿಸುವಂತಹ ಮಹತ್ತರವಾದ ಕೆಲಸವನ್ನು ಈ ವೇದಿಕೆ ಮಾಡುತ್ತಿದೆ.

ಕಲಬುರ್ಗಿಯ ಪೊಲೀಸ್ ಇಲಾಖೆಯ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಪಿ.ಎಸ್.ಐ ಮಲ್ಲಿಕಾರ್ಜುನ ಬಂಡೆಯವರ ಹತ್ಯೆಯನ್ನು ಸಿ.ಬಿ.ಐ ತನಿಖೆಗೆ ವಹಿಸಬೇಕೆಂದು ಮೊಟ್ಟ ಮೊದಲು ಧ್ವನಿ ಎತ್ತುವ ಜೊತೆಗೆ ಕಲಬುರ್ಗಿಯಲ್ಲಿ ಧರಣಿಯನ್ನು ಹಮ್ಮಿಕೊಂಡು ಸಮಾಜದ ಯಾವೊಬ್ಬ ಮುಖಂಡನೂ, ನೂರಾರು ವರ್ಷಗಳ ಇತಿಹಾಸವುಳ್ಳ ಅತೀ ದೊಡ್ಡ ಸಂಸ್ಥೆಗಳೂ ಮಾಡದ ಕೆಲಸವನ್ನು ಒಂದುವರೆ ವರ್ಷದ ಹಸುಗೂಸಾದಂತಹ ವೀರಶೈವ ಲಿಂಗಾಯತ ಯುವ ವೇದಿಕೆ ಮಾಡಿತ್ತೆಂಬುದು ಹೆಮ್ಮೆಯ ಸಂಗತಿ.

ಇನ್ನು ಹೋರಾಟ ಫಲಿಸದೇ ಇದ್ದಾಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಲ್ಲಮ್ಮ ಬಂಡೆಯವರಿಗೆ ನ್ಯಾಯ ಒದಗಿಸಿಕೊಡಲೇಬೇಕೆಂದು ಹೋರಾಟಕ್ಕೆ ಸಿದ್ದರಾಗಿ ರಾಜಧಾನಿಯ ಮಹಾತ್ಮ ಗಾಂಧಿ ವೃತ್ತದಲ್ಲಿ ಬಂಡೆ ಅವರ ಇಳಿವಯಸ್ಸಿನ ತಂದೆ ಅವರನ್ನೂ ಕರೆತಂದು ಇಲ್ಲಿ ಹೋರಾಟಕ್ಕಿಳಿದ ಸಂದರ್ಭದಲ್ಲಿ ನಿದ್ದೆಯಲ್ಲಿದ್ದ ವಿರೋಧ ಪಕ್ಷದವೂ ಸಹ ನಮ್ಮ ಹೋರಾಟಕ್ಕೆ ಬೆಂಬಲಿಸಿತ್ತೆಂಬುದು ಗಮನಾರ್ಹ. ಅಷ್ಟೇ ಅಲ್ಲ ಹೋರಾಟದ ಪ್ರತಿಫಲವಾಗಿ ಫಲದಯಾಕವಾಗಿತ್ತಾದರೂ ಮಲ್ಲಮ್ಮನವರನ್ನು ಬದುಕಿಸಿಕೊಳ್ಳಲಾಗಲಿಲ್ಲ.

ಸಮಾಜದ ಸಿಂಗಂ ಎಂದೇ ಪ್ರಖ್ಯಾತಿಯನ್ನು ಪದೆದ ದಿ.ಮಲ್ಲಿಕಾರ್ಜುನ ಬಂಡೆ ಅವರನ್ನು ಅನಾಥ ಮಕ್ಕಳನ್ನಾಗಿಸದೇ ವೇದಿಕೆಯು ಇಂದು ತಾಯಿ ಪ್ರೀತಿಯನ್ನು ನೀಡಿ ಸರ್ಕಾರದಿಂದ ಬರಬೇಕಿರುವ ಎಲ್ಲಾ ಪರಿಹಾರವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದೆ ಎಂಬುದು ಹೆಮ್ಮೆಯೇ ಸರಿ.

ಸಾಂಸ್ಕೃತಿಕ ನಗರಿ ಮೈಸೂರಿಗೆ ಹತ್ತಿರುವ ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರಲ್ಲಿ ವೀರಶೈವ ಲಿಂಗಾಯತ ಸಮುದಾಯದ ಕುಟುಂಬಕ್ಕೆ ಊರಿನ ಅನ್ಯ ಸಮುದಾಯದ ಹಿರಿಯರೆನ್ನಿಸಿಕೊಂಡವರು ಗ್ರಾಮದಿಂದ ವಿನಾಕಾರಣ ಬಹಿಷ್ಕಾರ ಹಾಕಿ, ಕುಟುಂಬದ ನೆಮ್ಮದಿಯನ್ನು ಕದಡಿದಲ್ಲದೇ, ಸಮಾಜದ ಸ್ವಸ್ತ್ಯವನ್ನು ಹಾಳುಗೆಡವುತಿದ್ದ ಹಿರಿಯರೆನ್ನಿಸಿಕೊಂಡಿದ್ದವರ ವಿರುದ್ಧ ಸೆಟೆದು ನಿಂತು, ಅನ್ಯಾಯಕ್ಕೊಳಗಾಗಿದ್ದ ಸಮುದಾಯದ ಕುಟುಂಬದ ನೆರವಿಗೆ ನಿಂತು ಹೋರಾಟ ನಡೆಸಿ ಕುಟುಂಬಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ಮಹತ್ತರ ಕಾರ್ಯ ಸಂಘಟನೆಯದ್ದು.

ಪ್ರತಿಭಟನೆಗಳು, ಹೋರಾಟಗಳು ಮಾತ್ರವಲ್ಲದೇ ಸಮಾಜದ ಯುವಕರನ್ನು ಸಮಾಜದ ಬಗ್ಗೆ ಪ್ರೀತಿ ಗೌರವವನ್ನು ಹೊಂದಬೇಕೆಂಬ ಹೆಬ್ಬಯಕೆಯಿಂದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು, ಮಂಗಳೂರು ಜಿಲ್ಲೆಯ ಮುಲ್ಕಿಯಲ್ಲಿ, ಹುಣಸೂರಿನಲ್ಲಿ, ಸೋಮವಾರಪೇಟೆಯಲ್ಲಿ ಹೀಗೆ ರಾಜ್ಯದ ನಾನಾ ತಾಲೂಕು ಕೇಂದ್ರಗಳಲ್ಲಿ ಪ್ರತೀ ತಿಂಗಳು ಬಸವಜ್ಯೋತಿ ಎಂಬ ಶರಣರ ಅರಿವು ಅನುಭಾವದ ಕಾರ್ಯಕ್ರಮ ನಡೆಸುತ್ತಿರುವುದು ವೇದಿಕೆಯ ಹೆಮ್ಮೆಯ ಹೆಜ್ಜೆಗಳಲ್ಲೊಂದು.

ವನ ಸಿರಿಗಾಗಿ ಸಸಿ ವಿತರಿಸುವುದರ ಜೊತೆಯಲ್ಲಿ ಅದನ್ನು ಬೆಳೆಸುವ ಜವಾಬ್ದಾರಿ. ಪ್ರತಿ ವರ್ಷ ರೇಣುಕರು, ಬಸವಣ್ಣನವರ ಜಯಂತಿಯಂದು ರಾಜ್ಯದ್ಯಂತ ವಿನೂತನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಯುವಕರನ್ನೂ ಮತ್ತು ಹಿರಿಯನ್ನು ಸಂಘಟಿಸುವುದು ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವ ಈ ಸಂಘಟನೆಯ ಸಧೃಢ ಬೇರು ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಪ್ರಶಾಂತ ಕಲ್ಲೂರ್ ರವರು.

ವೇದಿಕೆಯ ಕಾರ್ಯಕ್ರಮಗಳನ್ನು ಪಟ್ಟಿ ಮಾಡಲು ಪುಟ ಸಾಲದು ಬರೆಯಲು ಹಾಳೆ ಸಾಲದು ಎಂಬಂತೆ ನೂರಾರು ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿರುವ ನಮ್ಮ ಮತ್ತೊಂದಷ್ಟು ಕೆಲಸಗಳ ಪಟ್ಟಿ ಇಂತಿದೆ :

 • ಮಹಾದಾಯಿ ಮಲಪ್ರಭಾ ನದಿ ಜೋಡಣೆ ವಿಚಾರವಾಗಿ ಬೆಂಗಳೂರು ನಗರದಲ್ಲಿ ಹೋರಾಟ, ನರಗುಂದ ನವಲಗುಂದ ಪ್ರತಿಭಟನಾಕಾರರಿಗೆ ಬೆಂಬಲ
 • ಲಿಂಗಕ್ಯರಾದ ಸಮಾಜದ ಸಾಧಕಾರ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು.
 • ಸಮಾಜದ ಪ್ರತಿನಿಧಿಗಳಾಗಿರುವಂತಹ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರುಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯದಲ್ಲಿ ಸದಾ ಮುಂದು.
 • ಸಮಾಜದ ಪ್ರತಿನಿಧಿಗಳಾಗಿ ಸಚಿವರು, ಎಂ ಎಲ್ ಎ , ಎಂ ಎಲ್ ಸಿ ಗಳನ್ನು ಅಭಿನಂಧಿಸಿ ಗೌರವಸಿ, ಸನ್ಮಾನಿಸುವ ಹೆಜ್ಜೆ ಎಲ್ಲರಿಗೂ ಪ್ರಶಂಶಿಸುವ ಕಾರ್ಯವಾಗಿದೆ.
 • ಉಪೇಂದ್ರ ಅಭಿನಯದ ಚಿತ್ರವೊಂದಕ್ಕೆ "ಬಸವಣ್ಣ" ಎಂದು ನಾಮಕರಣ ಮಾಡಿದಷ್ಟೇ ಅಲ್ಲದೇ ಚಿತ್ರದ ಪೋಸ್ಟರ್ಗಳಲ್ಲಿ ಲಾಂಗು ಮಚ್ಚುಗಳನ್ನು ತೋರಿಸಲಾದ ಕಾರಣ ಅಣ್ಣ ಬಸವಣ್ಣವರ ಹೆಸರಿಗೆ ಯಾವುದೇ ಅವಮಾನವಾಗಬಾರದೆಂಬ ನಿಟ್ಟಿನಲ್ಲಿ ಚಿತ್ರದ ಹೆಸರನ್ನು ಬದಲಿಸಿಸುವಲ್ಲಿ ಯಶಸ್ವಿಯಾದೆವು.
 • ವೀರಶೈವ ಲಿಂಗಾಯತ ಯುವ ವೇದಿಕೆ ಸಮಾಜದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯದಲ್ಲಿ ಮುನ್ನಡೆ.
 • ನಮ್ಮ ಸಮಾಜದ ಮುಖವಾಣಿ ಎಂದೇ ಬಿಂಬಿಸಲ್ಪಟ್ಟಿರುವ ಬಸವಜ್ಯೋತಿ ಎಂಬ ಆಧ್ಯಾತ್ಮಿಕ ಮಾಸಿಕ ಪತ್ರಿಕೆಯನ್ನು ಹೊರತಂದು ಪತ್ರಿಕೆಯಲ್ಲಿ ಪ್ರತೀ ತಿಂಗಳು ನಮ್ಮ ಮಠಗಳ ಇತಿಹಾಸ ಮಠಾಧೀಶರ ಪರಿಚಯ, ಶರಣರ ಪರಿಚಯ, ವಚನಾರ್ಥಗಳು, ಬರಹ ರೂಪದಲ್ಲಿ ಶ್ರೀಗಳ ಪ್ರವಚನ ಹೀಗೆ ಹತ್ತು ಹಲವಾರು ವಿಚಾರಗಳನ್ನೊಳಗೊಂಡ ಪತ್ರಿಕೆಯೂ ವೀರಶೈವ ಲಿಂಗಾಯತ ಯುವ ವೇದಿಕೆ ಹೆಮ್ಮೆಯ ಕೊಡುಗೆ.
 • ಶರಣರ ವಚನಗಳ ಸ್ಟಿಕರ್, ಶರಣು ಬನ್ನಿ, ಕಾಯಕವೇ ಕೈಲಾಸ ಸ್ಟಿಕರ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
 • ಮಂಗಳೂರಿನ ಜಂಗಮ ಮಠದ ಉಳಿವಿಗಾಗಿ ಹೋರಾಟ.
 • ವೇದಿಕೆಯು ಉಚಿತ ವಿವಾಹ ವೇದಿಕೆ, ಉಚಿತ ಉದ್ಯೋಗ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
 • ಸಮಾಜದ ಬಡವರನ್ನು ಗುರುತಿಸಿ ಆರ್ಥಿಕವಾಗಿ ಸಹಾಯವನ್ನು ಮಾಡಲಾಗುತ್ತಿದೆ.
 • ಸಮಾಜದ ಸಾಧಕರ ಹುಟ್ಟುಹಬ್ಬವನ್ನು ಆಚರಿಸುವುದು, ಕೇಕ್ ಕತ್ತರಿಸಿ ಅಥವಾ ಪಟಾಕಿ ಸಿಡಿಸಿ ಆಚರಿಸುವ ಹುಟ್ಟುಹಬ್ಬವಲ್ಲ ಬಡವರಿಗೆ ನೆರವಾಗುವಂತಹ ಹುಟ್ಟುಹಬ್ಬ ಕಾರ್ಯಕ್ರಮವನ್ನು ನಡೆಸುವುದು.
ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಂಘಟನೆಯ ಸಾಧನೆ ಸಾಕಷ್ಟಿವೆ ಅವಗಳಲ್ಲಿ ಕೆಲವನ್ನಾಯ್ದು ನಿಮ್ಮ ಮುಂದಿಟ್ಟಿದ್ದೇವೆ. ವರ್ಷದ ೩೬೫ ದಿನಗಳು, ದಿನದ ೨೪ ಗಂಟೆಯಲ್ಲಿ ೧೮ ಗಂಟೆಗಳ ಕಾಲ ವೇದಿಕೆಯು ಕಾರ್ಯೋನ್ಮುಖವಾಗಿ ಶ್ರಮಿಸುತ್ತಿದ್ದು, ಸಮಾಜದ ಏಕತೆಯ ಮಹದಾಸೆಯನ್ನು ಹೊತ್ತು ಉತ್ತಮ ಕಾರ್ಯದಲ್ಲಿ ತೊಡಗಿಕೊಂಡಿದೆ. ಸಮಾಜದ ಸರ್ವತೋಮುಖ ಅಭಿವೃದ್ಧಿಯ ಹಾದಿಯಲ್ಲಿದೆ ಸಂಘಟನೆ. ಸಂಘಟನೆಯು ಈ ಕಾರ್ಯಗಳನ್ನು ಮುಂದುವರೆಸುವುದರ ಜೊತೆ ಜೊತೆಯಲ್ಲೇ ಮತ್ತೊಂದಷ್ಟು ಕನಸು, ಆಸೆಗಳನ್ನು ಹೊತ್ತಿದ್ದು ನಮ್ಮ ಸಮಾಜದಲ್ಲಿ ಸಮಾಜದವರು ತಲೆ ಎತ್ತಿ ಎದೆಯುಬ್ಬರಿಸಿ ನಾನೊಬ್ಬ ವೀರಶೈವ ಲಿಂಗಾಯತನೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ದಿನ ಬರಬೇಕೆಂದು ದುಡಿಯುತ್ತಿದ್ದೇವೆ ಆ ನಂಬಿಕೆ ನಮ್ಮಲ್ಲಿ ೧೦೦% ಇದೆ .